ರವಿಕಾಂತ ಪಾಟೀಲರು ಇಂಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ರಾಜಕೀಯ ಧುರೀಣರು. == ಜನನ == ರವಿಕಾಂತ ಪಾಟೀಲರು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾತಲಗಾಂವ ಗ್ರಾಮದಲ್ಲಿ ಜನಿಸಿದರು. == ಶಿಕ್ಷಣ == ಪಾಟೀಲರು ೧೦ನೇ ತರಗತಿಯವರೆಗೆ ಶಿಕ್ಷಣವನ್ನು ಪೂರೈಸಿದ್ದಾರೆ. == ರಾಜಕೀಯ == ರವಿಕಾಂತ ಪಾಟೀಲರು ಇಂಡಿ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಪಕ್ಷೇತರರಾಗಿ ಆಯ್ಕೆಯಾಗಿದ್ದರು. ಪಾಟೀಲರು 1996ರಲ್ಲಿ ಮಹಾರಾಷ್ಟ್ರದ ಸೊಲ್ಲಾಪುರ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ 7000 ಮತಗಳ ಅಂತರದಿಂದ ಪರಾಜಿತರಾದರು. == ದಾಖಲೆ == ರವಿಕಾಂತ ಪಾಟೀಲರು ಇಂಡಿ ವಿಧಾನಸಭಾ ಕ್ಷೇತ್ರದಿಂದ 1994, 1999 ಹಾಗೂ 2004ರಲ್ಲಿ ಪಕ್ಷೇತರರಾಗಿ ಆಯ್ಕೆಯಾಗಿ ಮೊದಲ ಬಾರಿಗೆ ವಿಜಯಪುರ ಜಿಲ್ಲೆಯಲ್ಲಿಯೇ ಹ್ಯಾಟ್ರಿಕ್‌ ವಿಜಯಭೇರಿ ದಾಖಲಿಸಿದ್ದಾರೆ. == ವೈಯಕ್ತಿಕ ಜೀವನ == ಶ್ರೀಯುತರು ಮಹಾರಾಷ್ಟ್ರದ ಸೊಲ್ಲಾಪುರ ನಗರದಲ್ಲಿ ವಾಸವಾಗಿದ್ದಾರೆ. == ಉಲ್ಲೇಖಗಳು ==